ಅಂಬಿಗಾ ನಾ ನಿನ್ನ

ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ

ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಛಿದ್ರವು ಅಂಬಿಗಾ
ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾ

ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ


ಹೊಳೆಯ ಭರವ ನೊಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ

ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ


ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ

ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ


ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ


ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ

***************************************************************************