ಅಂಬ ಪಾಲಿಸೆ ಜಗದಂಬ ಪಾಲಿಸೆ

ಅಂಬ ಪಾಲಿಸೆ ಜಗದಂಬ ಪಾಲಿಸೆ
ಭಕ್ತ ಕೋಟಿ ಜನರನ್ನು ನೀನೆ ಉದ್ದರಿಸೆ

ದರ್ಶನಕ್ಕೆ ಸಾಲು ಸಾಲು ಭಕ್ತ ವೃಂದವು
ನಗು ಮೊಗದ ಗಾಂಭೀರ್ಯ ನೋಟ ಚೆಂದವು
ನಿನ್ನ ನೋಟ ಚೆಂದವು

ಅಂಬ ಪಾಲಿಸೆ ಜಗದಂಬ ಪಾಲಿಸೆ
ಭಕ್ತ ಕೋಟಿ ಜನರನ್ನು ನೀನೆ ಉದ್ದರಿಸೆ

ಹರಸು ತಾಯೆ ಶಿಷ್ಟರನ್ನು ಮಹಿಷ ಮರ್ದಿನಿಯೇ
ಶಿರಸೀಪುರದ ಶಿರವೇ ಮಾರಿಕಾಂಬೆಯೇ
ನೀ ಮಾರಿಕಾಂಬೆಯೇ

ಅಂಬ ಪಾಲಿಸೆ ಜಗದಂಬ ಪಾಲಿಸೆ
ಭಕ್ತ ಕೋಟಿ ಜನರನ್ನು ನೀನೆ ಉದ್ದರಿಸೆ

ನಿನ್ನ ಸನ್ನಿಧಾನ ಒಂದು ಭಾಗ್ಯದ ಸಿರಿಯು
ನೆಮ್ಮದಿಯ ಕವಚ ತೊಟ್ಟು ನೋವ ಮರೆವೆವು
ನಾವು ನೋವ ಮರೆವೆವು

ಅಂಬ ಪಾಲಿಸೆ ಜಗದಂಬ ಪಾಲಿಸೆ
ಭಕ್ತ ಕೋಟಿ ಜನರನ್ನು ನೀನೆ ಉದ್ದರಿಸೆ

ನಿನ್ನ ಸೇವೆಗೈವ ಭಾಗ್ಯ ನಮ್ಮದಾಗಲಿ
ಜ್ಞಾನ ಸುಸ್ವರ ಭಕ್ತಿ ನಮಗೆ ಒದಗಲಿ
ಅದುವೇ ನಮಗೆ ಒದಗಲಿ

ಅಂಬ ಪಾಲಿಸೆ ಜಗದಂಬ ಪಾಲಿಸೆ
ಭಕ್ತ ಕೋಟಿ ಜನರನ್ನು ನೀನೆ ಉದ್ದರಿಸೆ

ಭಕ್ತ ಕೋಟಿ ಜನರನ್ನು ನೀನೆ ಉದ್ದರಿಸೆ
ಭಕ್ತ ಕೋಟಿ ಜನರನ್ನು ನೀನೆ ಉದ್ದರಿಸೆ
**************************************************************