ಅಂಬ ಮಂಗಳಂ

ಅಂಬ ಮಂಗಳಂ ಜಗದಂಬ ಮಂಗಳಂ
ಮಂಗಳಾ ರೂಪಿಣಿ ಗೌರಿ ಮಂಗಳಂ

ವಾಣಿ ಮಂಗಳಂ ಕಲ್ಯಾಣಿ ಮಂಗಳಂ
ಓಂಕಾರ ಸ್ವರೂಪಿಣಿ ದೇವಿ ಮಂಗಳಂ

ಅಂಬ ಮಂಗಳಂ ಭ್ರಮರಾಂಬ ಮಂಗಳಂ
ಪರಶಿವನ ಹೃದಯ ರಾಣಿ ಗೌರಿ ಮಂಗಳಂ

ಜನನಿ ಮಂಗಳಂ ಜಗಜ್ಜನನಿ ಮಂಗಳಂ
ಮೂಲೋಕ ಸಂಚಾರಿಣಿ ಅಮ್ಮ ಮಂಗಳಂ

ಶಕ್ತಿ ಮಂಗಳಂ ಶಿವಶಕ್ತಿ ಮಂಗಳಂ
ಅರ್ಧನಾರೀಶ್ವರಿ ಗೌರಿ ಮಂಗಳಂ

ಲಲಿತೆ ಮಂಗಳಂ ಶುಭ ಚರಿತೆ ಮಂಗಳಂ
ಶ್ರೀ ತ್ರಿಪುರ ಸುಂದರಿ ದೇವಿ ಮಂಗಳಂ


***************************************************