ಅಲ್ಲಿ ನೋಡಲು ರಾಮ
ಅಲ್ಲಿ ನೋಡಲು ರಾಮ ಶ್ರೀರಾಮ ಇಲ್ಲಿ ನೋಡಲು ರಾಮ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ
ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೆ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ
ಅಲ್ಲಿ ನೋಡಲು ರಾಮ ಶ್ರೀರಾಮ ಇಲ್ಲಿ ನೋಡಲು ರಾಮ
ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳ್ ಈಪರಿ ರೂಪವುಂಟೆ
ಲವಮಾತ್ರದಿ ಅಸುರ ದುರುಳರೆಲ್ಲರು
ಅವರವರ್ ಹೊಡೆದಾಡಿ ಹತರಾಗಿ ಪೋದರು
ಅಲ್ಲಿ ನೋಡಲು ರಾಮ ಶ್ರೀರಾಮ ಇಲ್ಲಿ ನೋಡಲು ರಾಮ
ಹನುಮದಾದಿ ಸಾಧುಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ
ಅಲ್ಲಿ ನೋಡಲು ರಾಮ ಶ್ರೀರಾಮ ಇಲ್ಲಿ ನೋಡಲು ರಾಮ
********************************************************************