ಆನಂದಮಯಗೆ ಚಿನ್ಮಯಗೆ
ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣನಿಗೆ ಆರತಿ ಎತ್ತಿರೆ ||
ವೇದವ ತಂದು ಬೆಟ್ಟವ ಪೊತ್ತು ಧರಣಿಯ
ಸಾಧಿಸಿ ಕಂಬದಿ ಬಂದವಗೆ
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿಮೂರುತಿಗೆ ಆರತಿ ಎತ್ತಿರೆ
ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣನಿಗೆ ಆರತಿ ಎತ್ತಿರೆ
ಇಂದುವದನೆ ಸಹಿತ ಅರಣ್ಯದೊಳಗಾಡಿ
ನಂದಗೋಕುಲದಲ್ಲಿ ನಲಿದವಗೆ
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗೆ ಆರತಿ ಎತ್ತಿರೆ
ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣನಿಗೆ ಆರತಿ ಎತ್ತಿರೆ
ತುರಗವನೇರಿ ದುಷ್ಟರ ಸೀಳಿ ಭಕ್ತರ
ಪೊರೆವ ಮಂಗಳ ಹಯವದನನಿಗೆ
ವರದ ಯಾದವಗಿರಿ ಚೆಲುವನಾರಾಯಣನ
ಚರಣ ಕಮಲಕೆ ಆರತಿ ಎತ್ತಿರೆ
ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣನಿಗೆ ಆರತಿ ಎತ್ತಿರೆ
****************************************************************