ಓ ಗಣನಾಯಕಾ

ಓ ಗಣನಾಯಕಾ 
ಬಾ ವಿಘ್ನೇಶ್ವರಾ
ಮಣಿವೇನಯ್ಯಾ ನಿನಗೆ ಶಿರಬಾಗಿ
ಕಾಣಿಸಯ್ಯ ಎಮಗೆ ಸರಿದಾರಿ

ಓ ಗಣನಾಯಕಾ

ಮದವೂರ ಪುರವಾಸ ಗಣನಾಯಕಾ
ಮೊದಲಾಗಿ ನಿನಪಾದಕಿದು ವಂದನೆ
ವಿಘ್ನೇಶ್ವರಾ...
ವಿಘ್ನಗಳನು ನಾಶಮಾಡು ಗಣನಾಯಕಾ

ಓ ಗಣನಾಯಕಾ

ಭಕ್ತವೃಂದವು ನಿನಗೆ ಭಕ್ತಿಯಿಂದ
ಮುತ್ತಿನಾರತಿ ಎತ್ತಿ ಶಿರಬಾಗಿದೆ
ಮುಕ್ತಿಪಥಾ...
ಮುಕ್ತಿಪಥವ ತೋರೊ ಗಣನಾಯಕಾ

ಓ ಗಣನಾಯಕಾ

ಶರಧಿ ಮಧ್ಯದಿ ಬಿದ್ದು ದಡ ಕಾಣದೆ
ಶರವು ಶ್ರೀ ಗಣನಾಥ ಬಹು ಬಳಲಿದೆ
ಸರಿದಾರಿಯ..
ಸರಿದಾರಿಯನು ತೋರೊ ಗಣನಾಯಕಾ

ಓ ಗಣನಾಯಕಾ

********************************************************