ಜಯತು ಜಯ ಗಣಪಾ
ಜಯತು ಜಯ ಗಣಪಾ
ನಿನ್ನ ಧ್ಯಾನಿಪ ಭಕ್ತ ಕೋಟಿಗೆ
ತೋರು ನಿಜರೂಪಾ
ಜಯ ಗಣೇಶಾ ಜನಮನ ಪ್ರೀತಾ
ಶಕ್ತಿ ಶಿವ ಸುತ ವಿಘ್ನ ವಿನಾಶಕ
ಸಿದ್ಧಿ ವಿನಾಯಕ ಬುದ್ದಿ ಪ್ರದಾಯಕಾ
ಶರಣೆಂಬೆ ಏಕದಂತ ಜೈ ಪ್ರಕಾಶ
ಜ್ಯೋತಿ ನೀನಯ್ಯಾ
ಜಯತು ಜಯ ಗಣಪಾ
ನಿನ್ನ ಧ್ಯಾನಿಪ ಭಕ್ತ ಕೋಟಿಗೆ
ತೋರು ನಿಜರೂಪಾ
ಜ್ಞಾನದಾತ ಜೈ ಗಣನಾಥ
ಆದಿಪೂಜಿತ ಮುನಿಜನ ಪ್ರೀತಾ
ಮೂಷಿಕ ವಾಹನ ಮೂಜಗ ಪಾಲನ
ಕಾಪಾಡು ದಿವ್ಯ ಜ್ಞಾನ ಪ್ರೇಮ ಪೂರ್ಣ
ಮೂರ್ತಿ ನೀನಯ್ಯಾ
ಜಯತು ಜಯ ಗಣಪಾ
ನಿನ್ನ ಧ್ಯಾನಿಪ ಭಕ್ತ ಕೋಟಿಗೆ
ತೋರು ನಿಜರೂಪಾ
ಪ್ರೀತ ಜನಪರಿಪಾಲಕ ನೀನೆ
ಭೂತ ಗಣ ಸಂಸೇವಿತಾ ನೀನೆ
ದೀನನು ನಾನಯ್ಯ ಜ್ಞಾನಿಯು ನೀನಯ್ಯ
ನಾನಿನ್ನ ದಾಸನಯ್ಯ
ನಿನ್ನ ಪಾದ ಸೇವೆ ನೀಡಯ್ಯಾ
ಜಯತು ಜಯ ಗಣಪಾ
ನಿನ್ನ ಧ್ಯಾನಿಪ ಭಕ್ತ ಕೋಟಿಗೆ
ತೋರು ನಿಜರೂಪಾ
*********************************************************