ತಾಂಡವ ನೃತ್ಯ ಹರೇ

ತಾಂಡವ ನೃತ್ಯ ಹರೇ ಗಜಾನನ 
ತಾಂಡವ ನೃತ್ಯ ಹರೇ

ಧಿಮಿಕಿಟ ಧಿಮಿಕಿಟ ತಾಳ ಮೃದಂಗ
ಬ್ರಹ್ಮ ತಾಳ ಹರೇ ಗಜಾನನ

ಮೂಷಕವಾಹನ ದೋಷನಿವಾರಣ
ಪಾಶಂಕುಶಧರನೇ ಗಜಾನನ

ಸುರವರ ಶಂಕರ ಗಿರಿಜ ಮನೋಹರ
ಸುರುಚಿರ ವರಕುವರ ಲಂಬೋದರ

ಶಂಕರಪುತ್ರ ಸುರನರಸ್ತೋತ್ರ
ಮಾತೇ ಶಿವಗೌರಿ ಗಜಾನನ

**************************************************