ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ಗುರುಕುಲಕೆ ವರವಾಗಿ, ಗುರಿ ತೋರೋ ಗುರುವಾಗಿ,
ಪೊರೆ ನೀನು ಎಂದೆಂದೂ
ಕರುಣಾಳು ಬಾ ಬಂಧು
ನೀ ನಮ್ಮ ಗೆಲುವಾಗಿ ಬಾ
ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ,
ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ
ದಯೆಯಿರಲಿ ನಮ್ಮಲ್ಲಿ ಗತಿ ನೀನೆ ಆದಿಯಲಿ
ನೀ ನಮ್ಮ ಗೆಲುವಾಗಿ ಬಾ
ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ನಿಧಿಯಾಗಿ , ವಿಧಿಯಾಗಿ, ಸುಧೆ ತುಂಬು ಒಲವಾಗಿ,
ಹಿರಿಯಾದ ಸಿರಿ ನೀನು, ಈ ಬಾಳ ಸವಿಜೇನು
ದಯೆಯಿರಲಿ ನಮ್ಮಲ್ಲಿ ಗತಿ ನೀನೆ ಆದಿಯಲಿ
ನೀ ನಮ್ಮ ಗೆಲುವಾಗಿ ಬಾ
ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
***********************************************************