ಬಂದಾಳ್ ನೋಡೇ ಬಂದಾಳ್ ನೋಡೇ ಮಂದಿರದೊಳು
ಬಂದಾಳ್ ನೋಡೇ ಬಂದಾಳ್ ನೋಡೇ ಮಂದಿರದೊಳು
ಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಸೌಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಬಂದಾಳ್ ನೋಡೇ ಬಂದಾಳ್ ನೋಡೇ ಮಂದಿರದೊಳು
ಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಸೌಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ
ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ
ಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಸೌಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ
ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ
ಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಸೌಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ
ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ
ಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಸೌಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ
ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ
ಭಾಗ್ಯದಲಕ್ಷ್ಮೀ ಬಂದಾಳು ನೋಡೇ
ಸೌಭಾಗ್ಯದಲಕ್ಷ್ಮೀ ಬಂದಾಳು ನೋಡೇ