ಲಕುಮಿ ಬಂದಳು ನೋಡಿರೋ
ಲಕುಮಿ ಬಂದಳು ನೋಡಿರೋ ನಮ್ಮನೆಗೆ
ಲಕುಮಿ ಬಂದಳು ನೋಡಿರೋ
ಝಣ ಝಣ ಕಾಂಚಾಣ ಬೀರುತಲಿ
ಹೊನ್ನಿನ ಮಳೆಯ ಸುರಿಸುತಲಿ
ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ಶ್ರೀ ಮಹಾಲಕ್ಷ್ಮಿ
ಬಂದಳು ನೋಡಿರೋ
ಲಕುಮಿ ಬಂದಳು ನೋಡಿರೋ ನಮ್ಮನೆಗೆ
ಲಕುಮಿ ಬಂದಳು ನೋಡಿರೋ
ವೈಕುಂಠ ಪುರ ವಾಸಿಯೇ ದೇವಿ
ನಾರಾಯಣನ ಅರಸಿಯೆ
ಆದಿ ಲಕ್ಷ್ಮಿಯೇ ನಮೋ ನಮೋ
ಸೌಭಾಗ್ಯ ಲಕ್ಷ್ಮಿಯೇ ನಮೋ ನಮೋ
ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ಶ್ರೀ ಮಹಾಲಕ್ಷ್ಮಿ
ಬಂದಳು ನೋಡಿರೋ
ಲಕುಮಿ ಬಂದಳು ನೋಡಿರೋ ನಮ್ಮನೆಗೆ
ಲಕುಮಿ ಬಂದಳು ನೋಡಿರೋ
ಕ್ಷೀರಸಾಗರ ಶೋಭಿತೆ ದೇವಿ
ಕರ ಕಮಲ ವಿರಾಜಿತೇ
ಧಾನ್ಯ ಲಕ್ಷ್ಮಿಯೇ ನಮೋ ನಮೋ
ಕನಕಾಂಬರಿಯೇ ನಮೋ ನಮೋ
ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ಶ್ರೀ ಮಹಾಲಕ್ಷ್ಮಿ
ಬಂದಳು ನೋಡಿರೋ
ಲಕುಮಿ ಬಂದಳು ನೋಡಿರೋ ನಮ್ಮನೆಗೆ
ಲಕುಮಿ ಬಂದಳು ನೋಡಿರೋ
ನವಕೋಟಿ ಸಿರಿವಂತಳೆ ದೇವಿ
ಜನಮನಕೆ ಅತಿ ಪ್ರೀತಳೆ
ಸಂತಾನ ಲಕ್ಷ್ಮಿಯೇ ನಮೋ ನಮೋ
ಧೈರ್ಯ ಲಕ್ಷ್ಮಿಯೇ ನಮೋ ನಮೋ
ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ಶ್ರೀ ಮಹಾಲಕ್ಷ್ಮಿ
ಬಂದಳು ನೋಡಿರೋ
ಲಕುಮಿ ಬಂದಳು ನೋಡಿರೋ ನಮ್ಮನೆಗೆ
ಲಕುಮಿ ಬಂದಳು ನೋಡಿರೋ
ಬಾಳಲ್ಲಿ ಬೆಳಕಾಗಿ ಬಾ ದೇವಿ
ಹರುಷದಲಿ ಕೃಪೆ ಮಾಡು ಬಾ
ವಿಜಯಲಕ್ಷ್ಮಿಯೇ ನಮೋ ನಮೋ
ವಿದ್ಯಾಲಕ್ಷ್ಮಿಯೇ ನಮೋ ನಮೋ
ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ಶ್ರೀ ಮಹಾಲಕ್ಷ್ಮಿ
ಬಂದಳು ನೋಡಿರೋ
ಲಕುಮಿ ಬಂದಳು ನೋಡಿರೋ ನಮ್ಮನೆಗೆ
ಲಕುಮಿ ಬಂದಳು ನೋಡಿರೋ
*********************************************************************