ಶಿವ ಶಿವ ಶಿವ ಎನ್ನಿರೊ

ಶಿವ ಶಿವ ಶಿವ ಎನ್ನಿರೊ ಮೂಜಗದವರೆಲ್ಲ
ಶಿವ ಶಿವ ಶಿವ ಎನ್ನಿರೊ

ಆಗಮ ಸಿದ್ಧಾಂತ ಮೂಲದ ಜಪವಿದು ಶಿವ ಶಿವ ಶಿವ......
ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಾ.....ಶಿವಾ.....ಶಿವ....... ಎನ್ನಿರೊ
ಶಿವ ಶಿವ ಶಿವ ಎನ್ನಿರೊ .

ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವ ಶಿವ ಶಿವ
ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಾ.....ಶಿವಾ.....ಶಿವಾ....... ಎನ್ನಿರೋ
ಶಿವ ಶಿವ ಶಿವ ಎನ್ನಿರೋ

ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವ ಶಿವ ಶಿವ.....
ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಾ..... ಶಿವಾ.....ಶಿವಾ..... ಎನ್ನಿರೋ
ಶಿವ ಶಿವ ಶಿವ ಎನ್ನಿರೋ.

ಸೃಷ್ಟಿಗೆ ಸದ್ಗುರುವಾಗಬೇಕಾದರೆ ಶಿವ ಶಿವ ಶಿವ.....
ನೀವು ನೆಲೆಯಾದಿ ಕೇಶವನ ಕೂಡಬೇಕಾದರೆ ಶಿವಾ..... ಶಿವಾ.....ಶಿವಾ....ಎನ್ನಿರೋ
ಶಿವ ಶಿವ ಶಿವ ಎನ್ನಿರೋ

*****************************************************************************