ಓಂ ನಮೋ ಭಕ್ತಪಾಲ

ಓಂ ನಮೋ ಭಕ್ತಪಾಲ 
ಓಂ ನಮೋ ನಾಟ್ಯಲೀಲಾ

ನೀಲಕಂಠ ಚರ್ಮಾಂಭರಧಾರಿ
ಢಮಢಮಢಮಢಮ ಢಮರೂಧಾರಿ
ಗಂಗಾ ಗೌರಿ ಹ್ರದಯವಿಹಾರಿ
ಸಕಲ ಸಾಧು ಜನ ಪ್ರೇಮ ವಿಹಾರಿ
ನಮೋ ........

ಸಕಲ ಜಗಕೆ ನೀನೆ ದಾರಿ
ಪಾರ್ವತಿ ಪ್ರಿಯ ಹರ ಓಂಕಾರಿ
ಎಲ್ಲ ವೇದಗಳ ಸಾಕಾರಿ
ಪಾಂಡುರಂಗನ ಭಕ್ತ ವಿಹಾರಿ
ನಮೋ .........

ಷಣ್ಮುಖ ಪಿತನೆ ಸುಮನೋಹಾರಿ
ಕೈಲಾಸವಾಸಿ ತ್ರಿಶೂಲಧಾರಿ
ಫಣಿಗಣ ಭೂಷಿತ ಚರ್ಮಧಾರಿ
ಮ್ರತ್ಯುಂಜಯ ಹರ ಭಯ ಪರಿಹಾರಿ
ನಮೋ...........

ಮಂಗಳ ಮೂರತಿ ಸುಂದರ ದೇವ
ಹಣೆಯಲಿ ಹೆಚ್ಚಿನ ಕಣ್ಣಿಹ ದೇವ
ಶಂಕರಹಿತ ಯೋಗಾಂಗನೆ ದೇವ
ನಿತ್ಯ ನಿರಂಜನ ನಿರ್ಮಲ ದೇವ
ನಮೋ.........

ಜಯ ಗಂಗಾಧರ ನಮಿಸುವೆ ಸತತ
ಶ್ರೀಹರ ಶಂಕರ ಬೇಡುವೆ ನಿರುತ
ಪಾರ್ವತಿನಾಥ ಪಾಲಿಸುಧಾತ
ಪಾವನುಧ್ಧಾರ ಪಾವನಚರಿತ
ನಮೋ...........


*************************************************************