ಆಕಾಶದಿಂದ ಭೂಮಿಗೆ ಬಂದ
ಆಕಾಶದಿಂದ ಭೂಮಿಗೆ ಬಂದ ಗಂಗಮ್ಮ
ಹರಿಪಾದ ತೊರೆದು ಬಂದ ದೇವಿಯಮ್ಮ
ನಿನ್ನ ಕರುಣಾ ಕಟಾಕ್ಷವನ್ನು ಕಂಡೆವಮ್ಮ
ನಿನ್ನ ಚರಣಾರವಿಂದ ಕಂಡು
ಕುಣಿಕುಣಿವೆಯಮ್ಮ
ಮೈತಾಳಿ ಭೂಮಿಯಲ್ಲಿ ನಿಂದೆಯಮ್ಮಾ
ಮಾಂಕಾಳಿ ಶಕ್ತಿಯಾಗಿ ಕಂಡೆವಮ್ಮಾ
ಕೋದಂಡರಾಮ ಪುರ
ಪಡೆಯಿತು ನಿನ್ನ ವರ
ನಿನ್ನೀ ಸನ್ನಿಧಿಯೇ
ಕೊಡುವುದು ನವನಿಧಿಯ
ನಮ್ಮ ತಾಯಿಯ ಉತ್ಸವ
ತರುವುದು ಎಲ್ಲಾ ಸುಖವ
ನಮ್ಮ ತಾಯಿಯ ಕಾಣುವ
ಯೋಗ ಸಿದ್ಧಿಯ ಹೊಂದುವ
ನಮ್ಮೀ ಶಕ್ತಿಯು ಎಟುಕುವವರೆಗೆ
ಭಕ್ತಿಯ ಬಿಡೆವಮ್ಮಾ
ನಾನಾ ಬಗೆಯ ಬೇಗೆಯಲ್ಲಿ
ಬೆಂದರು ನಿನ್ನನು ಬಿಡೆವಮ್ಮಾ...
ಏನೇ ಆದರು ನೀನೆ ಗತಿಯು
ಕರುಣೆಯ ತೋರಿ ಕಾಯಮ್ಮಾ...
ನಿತ್ಯಾನಂದದ ಸತ್ಯ ಸ್ವರೂಪಿಣಿ
ಸಚ್ಚಿದಾನಂದರೂಪಿಣಿ...