ಆವಾ ಕುಲವೊ ರಂಗಾ
ಆವಾ ಕುಲವೊ ರಂಗಾ....ಅರಿಯಲಾಗದೂ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಅವಾ ಕುಲವೆಂದರಿಯಾಲಾಗದೂ
ಗೋವಕಾಯ್ವಾ ಗೊಲ್ಲನಂತೆ..
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ..ಆವಾ ಕುಲವೊ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ..
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ..
ಕೊಳಲನೂದಿ ಮೃಗಪಕ್ಷಿಗಳಾ
ಮರಳು ಮಾಡಿದನಂತೆ..
ತರಳತನದಿ ವರಳನಿಗಹೀ
ಮರವಾ ಮುರಿದು ಮತ್ತೆ ಹಾರಿ
ತೆರೆದು ಬಾಯೊಳಿಗಿರೇಳು ಲೋಕವಾ
ಇರಿಸಿ ತಾಯಿಗೆ ತೋರ್ದನಂತೆ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಗೊಲ್ಲತ್ತಿಯರಾ ಮನೆಯಹೊಕ್ಕು..
ಕಳ್ಳತನವಾ ಮಾಡಿದನಂತೆ..
ಗೊಲ್ಲತ್ತಿಯರಾ ಮನೆಯಹೊಕ್ಕು..
ಕಳ್ಳತನವಾ ಮಾಡಿದನಂತೆ..
ಗೊಲ್ಲದ ಪುತನಿ ವಿಷವಾನುಂಡು
ಮೆಲ್ಲನೆ ತೃಣನಾ ಕೊಂದನಂತೆ..
ಪಕ್ಷಿ ತನ್ನ ವಾಹನನಂತೆ ಹಾವು
ತನ್ನ ಹಾಸಿಗೆಯಂತೆ..
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದು ಮಖವಾ ಚೆಲ್ವನಂತೆ..ಆವಾ ಕುಲವೊ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ..
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ..
ಧರಣಿಯನ್ನು ಬೇಡಿದನಂತೆ..
ಇರುಳು ಲೋಕದಾ ಒಡೆಯನಂತೆ..
ಹಡಗಿನಿಂದಲೀ ಬಂದನಂತೆ
ಕಡಲ ದಡೆಯಲಿ ನಿಂದನಂತೆ
ಒಡನೆ ಮಾದ್ವರಿಗೊಲಿದನಂತೆ
ಒಡೆಯಾ ಹಯಾವದನನಂತೆ
ಒಡನೆ ಮಾದ್ವರಿಗೊಲಿದನಂತೆ
ಒಡೆಯಾ ಹಯಾವದನನಂತೆ
ಆವಾ ಕುಲವೊ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಆವಾ ಕುಲವೊ ರಂಗಾ....ಅರಿಯಲಾಗದೂ..
ಅವಾ ಕುಲವೆಂದರಿಯಾಲಾಗದೂ
ಗೋವಕಾಯ್ವಾ ಗೊಲ್ಲನಂತೆ..
ದೇವಲೋಕದ ಪಾರಿಜಾತದ ಹೂವ
ಸತಿಗೆ ತಂದನಂತೆ..ಆವಾ ಕುಲವೊ
ಆವಾ ಕುಲವೊ ರಂಗಾ....ಅರಿಯಲಾಗದೂ..
ಆವಾ ಕುಲವೊರಂಗಾ....ಅರಿಯಲಾಗದೂ..
*************************************************************