ಅಮ್ಮ ಬಾರಮ್ಮ
ಅಮ್ಮ ಬಾರಮ್ಮ ನಮ್ಮ ತಾಯಿ ಬಾರಮ್ಮ
ಅಮ್ಮ ಬಾರಮ್ಮ ನಮ್ಮ ದೇವಿ ಬಾರಮ್ಮ
||ಅಮ್ಮ ಬಾರಮ್ಮ||
ಮೂರು ಲೋಕದೊಡೆಯ
ಶಿವನ ರಾಣಿಯೆ ಬಾರಮ್ಮ
ನಿನ್ನ ಗೆಜ್ಜೆಯ ನಾದ ಘಳಿರ್ ಘಳಿರ್
ಎಂದು ತಾಯೆ ಬಾರಮ್ಮ
||ಅಮ್ಮ ಬಾರಮ್ಮ||
ಗಜಮುಖ ಜನನಿಯೆ ಧೀರ ಗಂಭೀರಳೆ
ಗಾಯತ್ರಿ ದೇವಿಯೆ ಬಾರಮ್ಮ
ಅಂಬಾ ಭವಾನಿ ಪರಶಿವನರಗಿಣಿ
ಗಂಗಾ ಭವಾನಿಯೆ ಬಾರಮ್ಮ
||ಅಮ್ಮ ಬಾರಮ್ಮ||
ಖಡ್ಗಧಾರಿಣಿ ತ್ರಿಶೂಲಪಾಣಿ
ಚಾಮುಂಡೇಶ್ವರಿ ಬಾರಮ್ಮ.
ರಾಜಾಧಿರಾಜರಿಂದ ಪೂಜಿಸಲ್ಪಡುವ
ರಾಜರಾಜೇಶ್ವರಿ ಬಾರಮ್ಮ
||ಅಮ್ಮ ಬಾರಮ್ಮ||
ಜಪವನು ಅರಿಯೆನು ತಪವನು ಅರಿಯೆನು
ಮೂಢನ ಕರುಣಿಸೆ ಬಾರಮ್ಮ
ಮೂಜಗ ವಂದಿತೆ ಮುರಹರ ವಲ್ಲಭೆ
ಮೂಕಾಂಬಿಕೆ ತಾಯಿ ಬಾರಮ್ಮ
||ಅಮ್ಮ ಬಾರಮ್ಮ||
ಶಂಕರ ಸ್ತುತಿಪೆ ಶ್ರೀಚಕ್ರ ಪೂಜಿತೆ
ಶಾರದೆ ದೇವಿಯೆ ಬಾರಮ್ಮ
ಶೃಂಗೇರಿಯಲ್ಲಿ ನಗುನಗುತಿರುವ
ಭಾರತಿ ದೇವಿಯೆ ಬಾರಮ್ಮ
||ಅಮ್ಮಬಾರಮ್ಮ||
ಕಂಚಿ ಕಾಮಾಕ್ಷಿ ,ಮಧುರೈ ಮೀನಾಕ್ಷಿ
ಕಾಶಿ ವಿಶಾಲಾಕ್ಷಿ ಬಾರಮ್ಮ
ಮಹಿಷಾ ಪುರದಲಿ ನೆಲೆಸಿರುವಂತ
ಮಹಿಷ ಮರ್ಧಿನಿ ಬಾರಮ್ಮ
||ಅಮ್ಮ ಬಾರಮ್ಮ||
ಶ್ರೀ ಸಿರಿ ಲಕ್ಷ್ಮೀ ,ಪ್ರಸನ್ನ ಲಕ್ಷ್ಮೀ
ಭಾಗ್ಯದ ಲಕ್ಷ್ಮಿಯೆ ಬಾರಮ್ಮ.
ಶ್ರಾವಣ ಮಾಸದಲಿ ಪೂಜಿಸಲ್ಪಡುವ
ವರ ಮಹಾಲಕ್ಷ್ಮಿಯೆ ಬಾರಮ್ಮ
||ಅಮ್ಮ ಬಾರಮ್ಮ||
ಗಜಮುಖ ಗೌರಿ ವರಸಿರಿ ಗೌರಿ
ಮಂಗಳ ಗೌರಿಯೆ ಬಾರಮ್ಮ.
ಭಾದ್ರಪದ ಮಾಸದಲಿ ಪೂಜಿಸಲ್ಪಡುವ
ಸ್ವರ್ಣ ಗೌರಿಯೆ ಬಾರಮ್ಮ.
||ಅಮ್ಮ ಬಾರಮ್ಮ||
ನವರಾತ್ರಿ ದೇವಿ ಮೂಲ ಸರಸ್ವತಿ
ಅಷ್ಠಮಿ ದುರ್ಗೆಯೆ ಬಾರಮ್ಮ.
ದಶಮಿಯ ದಿನದೊಳು ವಿಜಯವ ಗೈವ
ವಿಜಯಲಕ್ಷ್ಮಿಯೆ ಬಾರಮ್ಮ
||ಅಮ್ಮ ಬಾರಮ್ಮ||
ಕಾಮಾಕ್ಷಿ ದೇವಿ ಮೀನಾಕ್ಷಿ ದೇವಿ
ಇಂದ್ರಾಕ್ಷಿ ದೇವಿ ಬಾರಮ್ಮ
ಕಾಮಿತ ಫಲಗಳ ನೀಡುವಂತ
ಕರುಣಾಸಾಗರಿ ಬಾರಮ್ಮ
||ಅಮ್ಮ ಬಾರಮ್ಮ||
******************************************************