ಬಾರಾ ಶ್ರೀ ಗಣಪತಿ

ಬಾರಾ ಶ್ರೀ ಗಣಪತಿ
ವಿದ್ಯಾವಾರಿಧಿ ಬಾರಾ ಮುದ್ದು ಗಣಪತಿ
ಎನ್ನ ನಾಲಿಗೆ ತೊಡರನು ಬಿಡಿಸಿ
ನುಡಿಸೆ ನೀ .. ಒಲಿದು ಬಾ..

ವೇದವ್ಯಾಸಗೆ ಭಾರತ ಬರೆದು
ವೇಗದಿ ವ್ಯಾಸನ ಸೋಲಿಸಿದವನೇ
ವೇದಪುರುಷಗೆ ಗುರುವಾದವನೇ
ವಿಶ್ವೇಶ್ವರನ ಕುಮಾರ
ಬಾರಾ ಗಣೇಶಾ

ಬಾರಾ ಶ್ರೀ ಗಣಪತಿ
ವಿದ್ಯಾವಾರಿಧಿ ಬಾರಾ ಮುದ್ದು ಗಣಪತಿ

ಚಿನ್ಮಯ ರೂಪನೇ ಕುಣಿ ಕುಣಿ ಬಾರಾ
ಮಂಗಳ ರೂಪನೇ ನಲಿನಲಿ ಬಾರಾ
ವಿಘ್ನೇಶ್ವರನೇ ಬಾರಾ
ಈಶ್ವರಸುತನೇ ಬಾರಾ
ಬಾರಾ ಮೈದೋರಾ

ಬಾರಾ ಶ್ರೀ ಗಣಪತಿ
ವಿದ್ಯಾವಾರಿಧಿ ಬಾರಾ ಮುದ್ದು ಗಣಪತಿ

ಕುಲುಕುಲು ಕುಣಿಯುವ ಕೊರಳಿನ ಹಾರದಿ
ಕಿಣಿ ಕಿಣಿ ಕಿಣಿರೆಂಬ ಕಂಕಣ ರವದಿ
ಘಲುಘಲು ಘಲಿರೆಂಬ ಗೆಜ್ಜೆಯ ನಾದದಿ
ನಾಟ್ಯವನಾಡುತ ನಟರಾಜ ಸುತ

ಬಾರಾ ಶ್ರೀ ಗಣಪತಿ
ವಿದ್ಯಾವಾರಿಧಿ ಬಾರಾ ಮುದ್ದು ಗಣಪತಿ

***************************************************