ಬೆಳಗಾಯ್ತು ಏಳು ಹೇ ಮುದ್ದುಬೆನಕ
ಬೆಳಗಾಯ್ತು ಏಳು ಹೇ ಮುದ್ದುಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ
ಅಂಬಾಪ್ರಿಯತನಯ ಆದಿ ಪೂಜಿತನೆ
ಮೂಡಣದೆ ರವಿಯೆದ್ದ ನೀ ಏಳು ಬೆನಕ
ಮಾಮರದಿ ಕೋಗಿಲೆಯು ಪಚ್ಚವರ್ಣದ ಗಿಳಿಯು
ಸುಪ್ರಭಾತವ ನಿನಗೆ ಹಾಡುತಿವೆ ಬೆನಕ
ಆ ನಿನ್ನ ಸುಂಡಿಲಿಯು ನಿನ್ನ ಬರುವನು ಕಾದು
ಕಾಳುಗಳ ತಿನ್ನುತಲಿ ಕುಳಿತಿಹುದು ಬೆನಕ
ಹುಲ್ಲುಗರಿಕೆಯು ಧೂರ್ವೆಯಾಗಿ ಕಾದಿಹುದು
ಪೂಜೆಯಲಿ ನಿನ್ನ ಅಲಂಕರಿಸಲೆಂದು
ನಾಗಲಿಂಗದ ಪುಷ್ಪಕಮಲಗಳು ಕಾದಿಹವು
ಗಣಪತಿಯ ಅರ್ಚನೆಗೆ ಸಿಧ್ಧವಾಗಿಹೆವೆಂದು
ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತಿವೆ ನಿನ್ನ ಸ್ವೀಕಾರಕಾಗಿ
ನಿನ್ನ ಪೂಜೆಯ ಮಾಡೆ ಭಕ್ತಜನ ವೃಂದ
ಕಾದಿಹುದು ನಿನ್ನ ವರ ಭಿಕ್ಷೆಗಾಗಿ
*********************************************