ಭಜನೆಗೆ ಪ್ರಾರಂಭ ಮಾಡೋಣ

ಭಜನೆಗೆ ಪ್ರಾರಂಭ ಮಾಡೋಣ
ಆಗಲಿ ಮೊದಲು ರಾಮಸ್ಮರಣೆ

ರಾಮ ಭಜನೆಗೆ ನಿಂತಾಗ
ಮಾಡಬೇಕು ಲಜ್ಜಾ ತ್ಯಾಗ

ತಾಳ ಸ್ವರವು ಹೇಗೋ ಇರಲಿ
ರಾಮನಾಮ ಬಾಯಿಗೆ ಬರಲಿ

ಭಜನೆಗೆ ಪ್ರಾರಂಭ ಮಾಡೋಣ
ಆಗಲಿ ಮೊದಲು ರಾಮಸ್ಮರಣೆ

ಲಕ್ಷ್ಯ ಬೇಡ ರಾಗದ ಕಡೆಗೆ
ಭಕ್ತಿ ತುಂಬಲಿ ಹೃದಯದೊಳಗೆ

ರಾಮನಾಮದ ರುಚಿಯು ಬಹಳಾ
ಮಹಾಭಾಗವತರೂ ಮರುಳಾ

ಭಜನೆಗೆ ಪ್ರಾರಂಭ ಮಾಡೋಣ
ಆಗಲಿ ಮೊದಲು ರಾಮಸ್ಮರಣೆ

ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ

******************************************************