ಬಿಡುವೇನೇನಯ್ಯ ಹನುಮ
ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ
ಬಿಡುವೆನೇನು ಹನುಮ ನಿನ್ನ ಅಡಿಗಳಿಗೆ ಶಿರವ ಬಾಗಿ
ದೃಢ ಭಕುತಿ ಸುಜ್ಞಾನವನ್ನು ತಡಮಾಡದೆ ನೀ ಕೊಡುವ ತನಕ
ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ
ಹಸ್ತ ಮ್ಯಾಲಕೆತ್ತಿದರೇನು ಹಾರಗಾಲ ಹಾಕಿದರೇನು
ಭ್ರತ್ಯನು ನಿನ್ನವನು ನಾನು ಹಸ್ತಿವರದನ ತೋರೊ ತನಕ
ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ
ಡೊಂಕು ಮೋರೆ ಬಾಲವ ತಿದ್ದಿ ಹುಂಕರಿಸಿದರೆ ಅಂಜುವನಲ್ಲ
ಕಿಂಕರನು ನಿನ್ನವನು ನಾನು ಪುರಂಧರ ವಿಠ್ಠಲನ ತೋರೋ ತನಕ
ಬಿಡುವೇನೇನಯ್ಯ ಹನುಮ, ಬಿಡುವೇನೇನಯ್ಯ
**************************************************************