ಬೂಚಿ ಬಂದಿದೆ, ರಂಗ ಮನೆಗೆ
ಬೂಚಿ ಬಂದಿದೆ, ರಂಗ ಮನೆಗೆ
ಚಾಚಿ ಕುಡಿದು ಪಾಚಿಕೊಳ್ಳೊ ಕೃಷ್ಣಯ್ಯ
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ
ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ
ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ
***************************************************************