ಬುದ್ಧಿ ಮಾತು ಹೇಳಿದರೆ
ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ
ಮನದಿ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ
ಅತ್ತೆಮಾವ ಗಂಜಿಕೊಂಡು ನಡೆಯಬೇಕಮ್ಮ
ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ
ಹೊತ್ತುಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ
ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ
ಕೊಟ್ಟು ಕೊಂಬುವ ನೆಂಟರಲ್ಲಿ ದ್ವೇಷ ಬೇಡಮ್ಮ
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲ ಬೇಡಮ್ಮ
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ
ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ
ಗರ್ವ ಕೋಪ ಮತ್ಸರವನ್ನು ಮಾಡಬೇಡಮ್ಮ
ಪರರ ನಿಂದಿಪ ಹೆಂಗಳೊಡನೆ ಬೇರೆಯಬೇಡಮ್ಮ
ಗುರು ಪುರಂದರ ವಿಠ್ಠಲನ್ನ ಮರೆಯಬೇಡಮ್ಮ
****************************************************************