ಚಿಂತ್ಯಾಕ ಮಾಡುತಿದ್ದಿ
ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ |ಸ್ವಾಮಿ ಚಿನ್ಮಯನಿದ್ದಾನೆ
ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ
ಸ್ವಾಮಿ ಚಿನ್ಮಯನಿದ್ದಾನೆ
ಎಳ್ಳು ಕೊನೆಯು ಮುಳ್ಳುಮೊನೆಯು
ಪೊಳ್ಳು ಬಿಡದೆ ಒಳಗೆ ಹೊರಗೆ
ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ
ಸ್ವಾಮಿ ಚಿನ್ಮಯನಿದ್ದಾನೆ
ಹಿಂದೆ ನಿನ್ನ ಸಲಹಿದರ‍್ಯಾರೋ
ಮುಂದೆ ನಿನ್ನ ಸಲಹುವರ‍್ಯಾರೋ
ಅಂದಿಗೂ ಇಂದಿಗೂ ಎಂದಿಗೂ
ನಂದಿ ವಾಹನನಿದ್ದಾನೆ
ಸ್ವಾಮಿ ಚಿನ್ಮಯನಿದ್ದಾನೆ
ನಾನು ನೀನು ಎಂಬುದು ಉಭಯ
ಹೀನ ಗುಣಗಳೆಲ್ಲಾ ಕಳೆದು
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ
ಸ್ವಾಮಿ ಚಿನ್ಮಯನಿದ್ದಾನೆ
ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ |ಸ್ವಾಮಿ ಚಿನ್ಮಯನಿದ್ದಾನೆ
ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ
ಸ್ವಾಮಿ ಚಿನ್ಮಯನಿದ್ದಾನೆ
********************************************************************