ಧನ್ಯನಾದೆನೋ ರಾಮ ಧನ್ಯನಾದೆನೋ

ಧನ್ಯನಾದೆನೋ ರಾಮ ಧನ್ಯನಾದೆನೋ
ಧನ್ಯನಾದೆನೋ ರಾಮ ಧನ್ಯನಾದೆನೋ

ಧನ್ಯನಾದೆ ರಾಮ ನಿನ್ನ
ಚರಣ ಕಮಲವನ್ನು ಕಂಡು

ನಮ್ಮ ಮಾತೆ ಭೂಮಿಜಾತೆ
ಸೀತೆಯನ್ನು ಕೂಡಿಕೊಂಡು
ಹೋಗೋದೆಲ್ಲಿಗೆ ರಾಮ ಸಾಗೋದೆಲ್ಲಿಗೆ
ಹೋಗೋದೆಲ್ಲಿಗೆ ರಾಮ ಸಾಗೋದೆಲ್ಲಿಗೆ

ಧನ್ಯನಾದೆನೋ ರಾಮ ಧನ್ಯನಾದೆನೋ
ಧನ್ಯನಾದೆನೋ ರಾಮ ಧನ್ಯನಾದೆನೋ

ತಮ್ಮನಾದ ಭರತನಿಗೆ
ಪಟ್ಟವನ್ನು ಬಿಟ್ಟುಕೊಟ್ಟು
ಹೋಗೋದೆಲ್ಲಿಗೆ ರಾಮ ಸಾಗೋದೆಲ್ಲಿಗೆ
ಹೋಗೋದೆಲ್ಲಿಗೆ ರಾಮ ಸಾಗೋದೆಲ್ಲಿಗೆ

ಧನ್ಯನಾದೆನೋ ರಾಮ ಧನ್ಯನಾದೆನೋ
ಧನ್ಯನಾದೆನೋ ರಾಮ ಧನ್ಯನಾದೆನೋ

ಇಂದು ನಮ್ಮ ಮನೆಯಲ್ಲಿದ್ದು
ನಾಳೆ ಮುಂಜಾನೆ ಎದ್ದು
ಹೋಗಬಾರದೆ ರಾಮ ಸಾಗಬಾರದೇ
ಹೋಗಬಾರದೆ ರಾಮ ಸಾಗಬಾರದೇ

ಧನ್ಯನಾದೆನೋ ರಾಮ ಧನ್ಯನಾದೆನೋ
ಧನ್ಯನಾದೆನೋ ರಾಮ ಧನ್ಯನಾದೆನೋ
*********************************************************