ದುಂಬಿಯಂತೆ ಹಾರಿ

ದುಂಬಿಯಂತೆ ಹಾರಿ ದುರ್ಗಾ ಬಂದಳು ನೋಡಿ 
ನಂದಿನಿಯ ಕಟಿಯಲ್ಲಿ ಆನಂದ ಕಟೀಲಿನಲಿ

ದುರ್ಗಮ ದಾನವ ದಮನಕ್ಕೆ
ದುರ್ಗೆ ಬಂದಳು ಅವತರಿಸಿ
ಕಲಕಲ ನಾದದಿ ಝಳಝಳ ಹರಿಯುವ
ಜಲದಲಿ ನೆಲೆಸಿಹ ಭ್ರಮರಾಂಬೆ
ದುರ್ಗಮ ದಾನವ ದಮನಕ್ಕೆ
ದುರ್ಗೆ ಬಂದಳು ಅವತರಿಸಿ
ದುಷ್ಟರ ತರಿಯಳು ಭಕ್ತರ ಕಾಯಲು
ದುರ್ಗದಂತೆ ತಾನೆದ್ದವಳು

ದುಂಬಿಯಂತೆ ಹಾರಿ ದುರ್ಗಾ ಬಂದಳು ನೋಡಿ
ನಂದಿನಿಯ ಕಟಿಯಲ್ಲಿ ಆನಂದ ಕಟೀಲಿನಲಿ

ಸ್ವರ್ಗವ ಗೆಲಿದ ರಕ್ಕಸನ
ಸೊಕ್ಕನು ಮುರಿದಳು ತಾ ಬಂದು
ದಳದಳ ಬಿರಿಯುವ , ಪರಿಮಳ ಸುರಿಯುವ
ಅರಳಲಿ ಕುಳಿತಿಹ ಭ್ರಮರಾಂಬೆ
ಸ್ವರ್ಗವ ಗೆಲಿದ ರಕ್ಕಸನ
ಸೊಕ್ಕನು ಮುರಿದಳು ತಾ ಬಂದು
ಷಟ್ಪದಿ ರೂಪದಿ ಕಚ್ಚುತ ಕೊಂದಳು
ದುಷ್ಟ ಅರುಣನ ಭ್ರಮರಾಂಬೆ

ದುಂಬಿಯಂತೆ ಹಾರಿ ದುರ್ಗಾ ಬಂದಳು ನೋಡಿ
ನಂದಿನಿಯ ಕಟಿಯಲ್ಲಿ ಆನಂದ ಕಟೀಲಿನಲಿ

***********************************************************