ಎಲ್ಲರೂ ಭಜಿಸುವ ಶ್ರೀಪಾದ
ಎಲ್ಲರೂ ಭಜಿಸುವ ಶ್ರೀಪಾದ
ಅದು ಮುಕ್ತಿದಾಯಕ ಶ್ರೀಪಾದ
ಆದಿ ಅಂತ್ಯವು ಅರಿತಿಹ ಪಾದ
ಮಹಿಷಮರ್ದಿನಿಯ ಶ್ರೀಪಾದ
ನವವಿಧ ಭಕ್ತಿಗೆ ಜಪಿಸುವ ಪಾದ
ದುಷ್ಟಶಮನಕೆ ಶ್ರೀಪಾದ
ಸ್ಮರಣೆಯಿಂದಲಿ ಕ್ಲೇಶನಾಶವು
ಚಾಮುಂಡೇಶ್ವರಿ ಶ್ರೀಪಾದ
ಎಲ್ಲರೂ ಭಜಿಸುವ ಶ್ರೀಪಾದ
ಅದು ಮುಕ್ತಿದಾಯಕ ಶ್ರೀಪಾದ
ಮಹಿಷಾಸುರನ ಮಧಿಸಿದ ಪಾದ
ಅಮೃತವರ್ಷಿಣಿ ಶ್ರೀಪಾದ
ಭಕುತರನೆಲ್ಲಾ ಕರುಣಿಪ ಪಾದ
ಚಾಮುಂಡೇಶ್ವರಿ ಶ್ರೀಪಾದ
ಎಲ್ಲರೂ ಭಜಿಸುವ ಶ್ರೀಪಾದ
ಅದು ಮುಕ್ತಿದಾಯಕ ಶ್ರೀಪಾದ
ದುಷ್ಟ ಶಿಕ್ಷಣೆ ಮಾಡಿದ ಪಾದ
ಶಿಷ್ಟ ರಕ್ಷಣೆಯ ಶ್ರೀಪಾದ
ಮಮತೆಯಿಂದಲಿ ಸಲಹುವ ಪಾದ
ಚಾಮುಂಡೇಶ್ವರಿ ಶ್ರೀಪಾದ
ಎಲ್ಲರೂ ಭಜಿಸುವ ಶ್ರೀಪಾದ
ಅದು ಮುಕ್ತಿದಾಯಕ ಶ್ರೀಪಾದ
****************************************************