ಎಲ್ಲೀ ಹನುಮನೋ

ಎಲ್ಲೀ ಹನುಮನೋ ಅಲ್ಲಿ ರಾಮನು 
ಎಲ್ಲೀ ರಾಮನೋ ಅಲ್ಲಿ ಹನುಮನು
ಎಲ್ಲೀ ಹನುಮನೋ ಅಲ್ಲಿ ರಾಮನು
ರಾಮನ ಉಸಿರೇ ಹನುಮಾ
ಹನುಮನ ಪ್ರಾಣವೇ ರಾಮಾ
ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು
ಎಲ್ಲೀ ಹನುಮನೋ ಅಲ್ಲಿ ರಾಮನು

ಎಲ್ಲೀ ನೆನೆದರು ಅಲ್ಲಿಯೇ ಇರುವನು
ಎಲ್ಲೀ ಕರೆದರೂ ಅಲ್ಲಿ ಬರುವನು
ನೆರಳಿನಂತೆಯೇ ಬಳಿಯಲಿರುವನೂ
ಕರುಣೆಯಿಂದ ಸುಖ ಶಾಂತಿ ನೀಡುವ ಮುಖ್ಯ ಪ್ರಾಣ

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು
ಎಲ್ಲೀ ಹನುಮನೋ ಅಲ್ಲಿ ರಾಮನು

ಮಂತ್ರ ಕೇಳನು ತಂತ್ರ ಕೇಳನು
ಗೋತ್ರ ಮಾಡುತ ತನ್ನ ಹೊಗಳು ಎನ್ನನು
ಪ್ರೇಮದಿಂದ ನೀ ಕರೆಯೆ ಬರುವನೂ
ಭಕ್ತನೊಬ್ಬನೇ ಅವನ ಗೆಲುವನು ಎಂದೆಂದು

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು
ಎಲ್ಲೀ ಹನುಮನೋ ಅಲ್ಲಿ ರಾಮನು

ಸ್ಮರಣೆ ಮಾತ್ರದಿ ಮನದಿ ಬೆರೆವನು
ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು
ಶಾಂತಿ ಕೊಡುವನು ನೆಮ್ಮದಿಯ ತರುವನು
ಮನಸಿಗೆ ಮಹದಾನಂದ ನೀಡುವ ಮುಖ್ಯ ಪ್ರಾಣ

ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು
ಎಲ್ಲೀ ಹನುಮನೋ ಅಲ್ಲಿ ರಾಮನು
ರಾಮನ ಉಸಿರೇ ಹನುಮಾ
ಹನುಮನ ಪ್ರಾಣವೇ ರಾಮಾ
ಎಲ್ಲೀ ಹನುಮನೋ ಅಲ್ಲಿ ರಾಮನು
ಎಲ್ಲೀ ರಾಮನೋ ಅಲ್ಲಿ ಹನುಮನು
ಎಲ್ಲೀ ಹನುಮನೋ ಅಲ್ಲಿ ರಾಮನು

************************************************************