ಏನ್ ಸವಿ ಏನ್ ಸವಿ ಹರಿನಾಮ

ಏನ್ ಸವಿ ಏನ್ ಸವಿ ಹರಿನಾಮ
ಮನಸು ತೃಪ್ತಿಯಾಗ್ವದು ಪ್ರೇಮ

ಜನರಿಗೆ ತಿಳಿಯದು ಇದರ್ ಮಹಿಮ
ಘನ್ನ ಮಹಿಮ ವಿಷ್ಣು ಸಾಸಿರ್ ನಾಮ

ಏನ್ ಸವಿ ಏನ್ ಸವಿ ಹರಿನಾಮ
ಮನಸು ತೃಪ್ತಿಯಾಗ್ವದು ಪ್ರೇಮ

ಪ್ರಹ್ಲಾದಗೊಲಿದ ಹರಿನಾಮದಿಂದ
ಅಲಲಲಲಲ ಧ್ರುವ ರಾಜೇಂದ್ರ
ಫಲ್ಗುಣಗೆ ಫಲಿಸಿತು ಹೆಚ್ಚೆಂದು
ರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ

ಏನ್ ಸವಿ ಏನ್ ಸವಿ ಹರಿನಾಮ
ಮನಸು ತೃಪ್ತಿಯಾಗ್ವದು ಪ್ರೇಮ

ರಕ್ಷಣೆಯ ಮಾಡುವುದು ಹರಿನಾಮ
ಮೋಕ್ಷ ಪದವಿ ಕೊಡುವುದು ನೇಮ
ಕೃಷ್ಣ ಕೃಷ್ಣ ಶ್ರೀಹರಿ ಸರ್ವೋತ್ತಮ
ಸಾಕ್ಷಾತ್ ಶ್ರೀಕೃಷ್ಣ ಪರಮಾತ್

ಏನ್ ಸವಿ ಏನ್ ಸವಿ ಹರಿನಾಮ
ಮನಸು ತೃಪ್ತಿಯಾಗ್ವದು ಪ್ರೇಮ

ಹರಿ ಹರಿ ಹರಿಸ್ಮರಣೆ ಮಾಡಬೇಕು
ಹರ ಹರ ಹರ ಎಂದು ಅನ್ನಬೇಕು
ವೇದಗಳು ಸಾರುತಿವೆ ಇವು ನಾಲ್ಕು
ಪುರಂದರವಿಠ್ಠಲನೆ ಸರ್ವ ಜಗಕೂ

ಏನ್ ಸವಿ ಏನ್ ಸವಿ ಹರಿನಾಮ
ಮನಸು ತೃಪ್ತಿಯಾಗ್ವದು ಪ್ರೇಮ


***********************************************************************