ಏನ ಹೇಳಲಿ ತಂಗಿ

ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ
ಕನಸು ಕಂಡೆನ ಮನದಲಿ ಕಳವಳಗೊ೦ಡೆನೆ

ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ

ಪೊನ್ನದ ಕಡಗನಿಟ್ಟು ತಿಮ್ಮಯ್ಯತಾ ಪೊಲ್ವ ನಾಮವ ಇಟ್ಟು
ಅ೦ದುಗೆ ಘಲುಗೆನ್ನುತ ಎನ್ನ ಮುಂದೆ ಬಂದು ನಿಂತಿದ್ದನಲ್ಲೇ

ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ

ಮಕರ ಕು೦ಡಲವನಿಟ್ಟು ತಿಮ್ಮಯ್ಯ ತಾ ಕಸ್ತೂರಿ ತಿಲಕವನಿಟ್ಟು
ಗೆಜ್ಜೆ ಘಲುಗೆನುತ ಸ್ವಾಮಿ ತಾ ಬಂದು ನಿಂತಿದ್ದನಲ್ಲೇ

ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ

ಮುತ್ತಿನ ಪಲ್ಲಕ್ಕಿಯ ಯತಿಗಳು ಹೊತ್ತು ನಿಂತಿದ್ದರಲ್ಲೇ
ಛತ್ರಚಾಮರದಿಂದ ರಂಗಯ್ಯನ ಸೇವೆಯ ಮಾಡುವರೇ

ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ

ತಾಮರ ಕಮಲದಲಿ ಕೃಷ್ಣಯ್ಯ ತಾ ಬಂದು ನಿಂತಿದನಲ್ಲೇ
ವಾಯು ಬೋಮ್ಮದಿಗಳು ರಂಗಯ್ಯನ ಸೇವೆಯ ಮಾಡುವರೇ

ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ ಹೃದಯಮ೦ಟಪದಲ್ಲಿ
ಸವಾ೯ಭರಣದಿಂದ ಪುರಂದರವಿಠಲನ ಕೂಡಿದೆನೆ

ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ
ಕನಸು ಕಂಡೆನ ಮನದಲಿ ಕಳವಳಗೊ೦ಡೆನೆ

*************************************************************