ಏನು ಚಂದವೋ ಕೃಷ್ಣ ನಿನ್ನ ಮಾಯೆ
ಏನು ಚಂದವೋ ಕೃಷ್ಣ ನಿನ್ನ ಮಾಯೆ
ಏನು ಚಂದವೋ ಕೃಷ್ಣ ನಿನ್ನ ಲೀಲೆ…
ನೂರು ಪುಟಗಳ ಪುಸ್ತಕ ಕೊಟ್ಟು
ಎರಡು ಪುಟದಲ್ಲಿ
ಜನನ ಮರಣದ ಲೆಕ್ಕವ ನೀ ಮೊದಲೆ ಬರೆದಿಟ್ಟು
ಉಳಿದ ಪುಟಗಳ ತುಂಬುವಂತೆ ನಮಗೆ ಬಿಟ್ಟು
ಆದರೂ ನೀ ಮೊದಲೇ ತುಂಬಿಟ್ಟು
ತಿಳಿಯದ ಹಾಗೆ ನೀ ಎಲ್ಲರ ಆಡಿಸುತ್ತಿರುವೆ
ಏನು ಚಂದವೋ ಕೃಷ್ಣ ನಿನ್ನ ಲೀಲೆ…
ಏನು ಚಂದವೋ ಕೃಷ್ಣ ನಿನ್ನ ಮಾಯೆ
ನಮ್ಮ ಜೀವ ನೀರ ಮೇಲಿನ ಗುಳ್ಳೆ
ಎಂದು ಒಡೆಯುವುದೊ
ಒಂದು ತಿಳಿಯದು ಕೃಷ್ಣ ನಿನ್ನ ಬಿಟ್ಟು
ನೀನು ಜಗತ್ತು, ನಾನು ಜೀವಿ
ನಾನು ನಿತ್ಯ, ನೀನು ಸತ್ಯ
ನೀನು ಧರ್ಮ, ನಾನು ಅಧರ್ಮಿ
ನಾನು ಕರ್ಮ, ನೀನು ಕರ್ತ
ಏನು ಚಂದ ಕೃಷ್ಣ ನಿನ್ನ ಲೀಲೆ…
ಏನು ಚಂದವೋ ಕೃಷ್ಣ ನಿನ್ನ ಮಾಯೆ
ಹೆಂಡತಿ ಮಕ್ಕಳ ಕೊಟ್ಟು ಬಡತನ ಇಟ್ಟೆ
ಎಲ್ಲರ ಜಾತಕ ನನ್ನ ಜಾತಕದಲ್ಲಿಟ್ಟೆ
ನೆಮ್ಮದಿ ಕೇಳಿದರೆ ಕಷ್ಟದ ಮೇಲೆ ಕಷ್ಟ ಕೊಟ್ಟೆ
ನೀ ಆಡಿಸಿ ನಗುತಿರುವೆ ನಾ ಅಳುತ್ತಿರುವೆ
ಐಶ್ವರ್ಯ ಕೊಟ್ಟು ಆಯಸ್ಸು ಕಿತ್ತೆ
ಮನೆಯ ಕೊಟ್ಟು ಮಡದಿಯ ಕಿತ್ತೆ
ಅನ್ನವ ಕೊಟ್ಟು ಆರೋಗ್ಯ ಕಿತ್ತೆ
ನೀ ಕರೆದಾಗ ನಾ ಬರಬೇಕು
ಏನು ಚಂದವೋ ಕೃಷ್ಣ ನಿನ್ನ ಲೀಲೆ…
ಏನು ಚಂದವೋ ಕೃಷ್ಣ ನಿನ್ನ ಮಾಯೆ
ನೀನು ನಿರಾಕಾರ,ನನ್ನದು ಆಕಾರ
ನಾನು ನಿನ್ನ ಕೈಗೊಂಬೆ ನಿನ್ನದೇ ಅಧಿಕಾರ
ನೀ ಆಡಿಸುವೆ ನಾ ಆಡುತಿರುವೆ
ಪುಸ್ತಕವು ನಿನ್ನದೇ ಪುಟಗಳು ನಿನ್ನವೇ
ಕವಿಯು ನೀನೇ, ಕಾವ್ಯವು ನೀನೇ
ನಮ್ಮಲ್ಲಿ ಹಾಡಿಸಿ
ನೀ ನಗುತಿರುವೆ ನಾ ಅಳುತ್ತಿರುವೆ
ಏನು ಚಂದವೋ ಕೃಷ್ಣ ನಿನ್ನ ಲೀಲೆ…
ಏನು ಚಂದವೋ ಕೃಷ್ಣ ನಿನ್ನ ಮಾಯೆ
****************************************************************