ಏನು ಧನ್ಯಳೋ ಲಕುಮಿ

ಏನು ಧನ್ಯಳೋ ಲಕುಮಿ
ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳೋ

ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಮಾಡಿ
ಪೂರ್ಣನೋಟದಿಂದ ಸುಖಿಸುತಿಹಳೋ

ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು
ಚಿತ್ರಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳೋ

ಸರ್ವಸ್ಥಳದಿ ವ್ಯಾಪ್ತನಾದ
ಸರ್ವದೋಷರಹಿತನಾದ
ಸರ್ವವಂದ್ಯನಾದ ಪುರಂದರ
ವಿಟ್ಠಲನ್ನ ಸೇವಿಸುವಳೋ


**********************************************