ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ

ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ
ಎನ್ನ ಗೋಪಿಯ ಕೃಷ್ಣಆಡಿ ಓಡಿ ಬಾ ಬಾ

ನಿನ್ನ ಪುಟ್ಟ ಪಾದ ತೋರಲೆಂದೆ ಬಾರೊ
ನಿನ್ನ ದಿವ್ಯ ನಾಮ ಪಾಡಿ ನಿಂತೆ ಬಾರೊ

ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ
ಎನ್ನ ಗೋಪಿಯ ಕೃಷ್ಣಆಡಿ ಓಡಿ ಬಾ ಬಾ

ದೇವಕಿ ನಂದನ ಕಾನನವಾಸ
ಕೇಶವ.... ಹರಿ ಮಾಧವ
ದೇವಕಿನಂದನ ರಾಧ ದೇವನೆ
ಕೇಶವ...... ಹರಿ ಮಾಧವ
ಗೋಕುಲ ಬಾಲಕ ಓಡಿ ಬಾ ಬಾ
ಗೋಪಾಲ ಬಾಲಕ ಆಡಿ ಬಾ ಬಾ

ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ
ಎನ್ನ ಗೋಪಿಯ ಕೃಷ್ಣಆಡಿ ಓಡಿ ಬಾ ಬಾ

ಪಾಂಡವ ರಕ್ಷಕ ಪಾಪ ವಿನಾಶಕ
ಕೇಶವ.....ಹರಿ ಮಾಧವ
ಅರ್ಜುನ ಸಾರಥಿ ಅಜ್ಞಾನ ನಾಶಕ
ಕೇಶವ..... ಹರಿ ಮಾಧವ
ಗೀತಾ ಭೋಧಕ ಓಡಿ ಬಾ ಬಾ
ಹೃದಯಾನಂದಕ ಆಡಿ ಬಾ ಬಾ

ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ
ಎನ್ನ ಗೋಪಿಯ ಕೃಷ್ಣಆಡಿ ಓಡಿ ಬಾ ಬಾ

ಕಂಸ ಮರ್ದನ , ಕಾಳಿಂಗ ಮರ್ದನ
ಕೇಶವ.... ಹರಿ ಮಾಧವ
ಆಶ್ರಿತ ವತ್ಸಲ ,ಆಪತ್ಭಾಂಧವ
ಕೇಶವ..... ಹರಿ ಮಾಧವ
ಓ೦ಕಾರ ನಾಮವೆ ಓಡಿ ಬಾ ಬಾ
ಆನಂದ ಗೀತವ ಆಡಿ ಬಾ ಬಾ
‌‌‌ ‌‌‌‌‌
ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ
ಎನ್ನ ಗೋಪಿಯ ಕೃಷ್ಣಆಡಿ ಓಡಿ ಬಾ ಬಾ

*********************************************************************************