ಹೇಗೆ ಮಾಡಲಿ…ಮಗುವಿಗೆ ಏನಾಯಿತೋ…
ಏನಾಯಿತೋ...ಏನಾಯಿತೋ...
ಯಶೋದೆ ಕಂದನಿಗೆ ಏನಾಯಿತೋ...
ಕೃಷ್ಣಾ...ಕೃಷ್ಣಾ...
ನಂದನ ಕಂದನಿಗೆ ಏನಾಯಿತೋ...
ಹೇಗೆ ಮಾಡಲಿ...ಮಗುವಿಗೆ ಏನಾಯಿತೋ...
ರಾಗಮವ ಬಲ್ಲವರು...
ತಿಳಿದು ಹೇಳಯ್ಯ...
ಹೇಳಯ್ಯ...ಹೇಳಯ್ಯ...
ಏನಾಯಿತೋ...ಏನಾಯಿತೋ...
ಕಣ್ಣು ಮುಚ್ಚಲೊಲ್ಲನು...ತೂಗಿ ಮಲಗಿಸಿದರೂ...
ಕಣ್ಣು ಮುಚ್ಚಲೊಲ್ಲನು...ತೂಗಿ ಮಲಗಿಸಿದರೂ...
ಬೆನ್ನ ಮೇಲಿನ ಬುಕಟಿ...ಕಲ್ಲರಿಯಾಗಿದೆ...
ಅಯ್ಯೋ...ಏನಾಯಿತೋ...
ರೋಗವಿದೇನು...ದಾಡೆಯಲಿ ನೀರು ಇಳಿಯುತದೆ...
ಕೂಗುವ ಧ್ವನಿಯೂ...ಕುಂದಿದುದಯ್ಯ...
ಏನಾಯಿತೋ...ಏನಾಯಿತೋ...
ಯಶೋದೆ ಕಂದನಿಗೆ ಏನಾಯಿತೋ...
ಖಂಡಸಕ್ಕರೆ ಹಾಲು..ಉಣಕೊಟ್ಟರೊಲ್ಲದೆ...
ಮಣ್ಣು ಬೇಕೆಂದು...ಕೈ ಚಾಚುತಿಹನು...
ಏನು ಕೊಡಲಿ...ಏನು ಕೊಡಲಿ...
ಮಂಡೆ ಜಡೆಕಟ್ಟಿತು...ಏನು ಮಾಡಲಿ...
ಹಿಂಡು ಸತಿಯರ ಸಂಗ...ಘನವಾಯಿತಯ್ಯ...
ಕೃಷ್ಣನ ಲೀಲೆ...ಕೃಷ್ಣನ ಲೀಲೆ...
ಯಾರು ಅರಿಯರೋ...ಯಾರು ಅರಿಯರೋ...
ಮಾಲೆಯನು ತೆಗೆದು...ಮೈಮುರಿದುಟ್ಟು ನಗುತಿದೆ...
ಮಾಲೆಯನು ತೆಗೆದು...ನಗುತಿದೆ...
ಕಲಕಿತನದಲ್ಲಿ...ಎಮ್ಮ ಕಾಡುತಾನೆ...
ನೆಲೆಯ ಬಲ್ಲವರು...ಕಾಣರಿಲ್ಲಯ್ಯ...
ಚೆಲುವ ಶ್ರೀಪುರಂದರ ವಿಠಲ...ಒಬ್ಬನೇ ಬಲ್ಲ...
ಒಬ್ಬನೇ ಬಲ್ಲ...ಒಬ್ಬನೇ ಬಲ್ಲ...
ಏನಾಯಿತೋ...ಏನಾಯಿತೋ...
ಕೃಷ್ಣನ ಲೀಲೆ...ಕೃಷ್ಣನ ಲೀಲೆ...
ಚೆಲುವ ಶ್ರೀಪುರಂದರ ವಿಠಲ...ಒಬ್ಬನೇ ಬಲ್ಲ...
************************************************************