ಹೇ ಜನನಿ ಜಗದಂಬೇ
ಹೇ ಜನನಿ ಜಗದಂಬೇ ನಿನ್ನಡಿಗೆ ಶರಣೆಂಬೆ
ಮೂರ್ಜಗವನಾಡಿಸುವ ಸೂತ್ರಧಾರಿಣಿ ನಿನ್ನ
ಪೂಜಿಸುತ ವಂದಿಸುತ ಬಾಗುವೆವು ನಾವ್ ಮುನ್ನ
ಹೇ ಜನನಿ ಜಗದಂಬೇ ನಿನ್ನಡಿಗೆ ಶರಣೆಂಬೆ
ಗಿರಿಜಾತೇ ನಿನ್ನಡಿಯ ನಂಬಿರುವ ಭಕ್ತರಿಗೆ
ಕೊಡೆಯಿಂದ ಮರೆಮಾಡು ಮರೆಯಲಾರೆನು ತಾಯೆ
ಹೇ ಜನನಿ ಜಗದಂಬೇ ನಿನ್ನಡಿಗೆ ಶರಣೆಂಬೆ
ಕರುಣಿಸುತ ನೀನೊಲಿಯೆ ಕಲ್ಲು ಕರಗುವುದಮ್ಮ
ಸುರವಿನುತೆ ನೀ ಮುನಿಯೆ ಬ್ರಹ್ಮಾಂಡವಿರದಮ್ಮಾ
ಹೇ ಜನನಿ ಜಗದಂಬೇ ನಿನ್ನಡಿಗೆ ಶರಣೆಂಬೆ
ಮೂರ್ಜಗವನಾಡಿಸುವ ಸೂತ್ರಧಾರಿಣಿ ನಿನ್ನ
ಪೂಜಿಸುತ ವಂದಿಸುತ ಬಾಗುವೆವು ನಾವ್ ಮುನ್ನ
*********************************************************************