ಹೂ ಬೇಕೇ ಪರಿಮಳದ

ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ ಪರಿಮಳದ

ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಳಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ

ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ ಪರಿಮಳದ

ರಂಗು ರಂಗುಗಳಿಂದ ಕಂಗಳಿಸುವ ಸ್ವಚ್ಛ
ಬಂಗಾರದ ಛವಿ ಭಂಗಿಸುವ
ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ
ಅಂಗ್ರಿಯ ಸಂಗದಿ ಮಂಗಳಕರವಾದ

ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ ಪರಿಮಳದ


***********************************************