ಇಕ್ಕೋ ನೋಡಿರೆ ಚಿಕ್ಕ ಹನುಮಂತಾ
ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. …ಆಆ…
ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ
ಭಕ್ತಿ ಕೊಡುವಂತ ಭಾರತಿಕಾಂತ
ರಾಮ ದೂತನೆ ಬಹು ಶೂರನೀತ
ರಾಮಚಂದ್ರಗಾಗಿ ಜಲಧಿದಾಟಿ ಪೋಗಿ
ಸೀತೆಗೆ ಉಂಗುರವನ್ನಿತ್ತ ಮಹಾನುಭಾವ
ಎಲ್ಲಾ ಕೇಳಿರೆ ವಲ್ಲಭನ ಮಹಿಮೆ
ತಲ್ಲನಯನ ಪಾಲ ನಿಲ್ಲಿಸಿದ ಲೋಲ
ಒಳ್ಳೆ ಗುಣಶೀಲ ಇಲ್ಲಿ ಬಹಳ ಪ್ರಭಲ
ಅಪಾರ ಮಹಿಮ ಬಹು ಶೂರನೀತ
ಅಂಜನಿಯ ಕಂದಾ ಸಂಜೀವಿನಿಯ ತಂದ
ನರಸಿಂಹ ದೂತ ನಮ್ಮ ಪೊರೆವಧಾತ
ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. …ಆಆ…
ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ
ಭಕ್ತಿ ಕೊಡುವಂತ ಭಾರತಿಕಾಂತ
******************************************************************