ಕೈ ಮುಗಿವೆ ಮದವೂರ ಗಣನಾಥನೇ
ಕೈ ಮುಗಿವೆ ಮದವೂರ ಗಣನಾಥನೇ
ಹೃದಯಾ ಸಚೇತಕ ವರದಾತನೇ
ಮಧುವಾಹಿನಿ ನದಿ ತೀರದಿ ಶೋಭಿಸುವವನೇ
ಮೊದಲೊಂದಿಸಿ ನಿನ ಪಾದಕೆ ತಲೆಬಾಗುವೆನಯ್ಯ
ದಯೆತೋರು ದೇವಾ ಗಣೇಶ
ಕೈ ಮುಗಿವೆ ಮದವೂರ ಗಣನಾಥನೇ
ಎಲ್ಲಾ ವಿಘ್ನವ ಹೋಮಕುಂಡದಿ
ಆಹುತಿ ಮಾಡಿ ನೀ ನಿಗ್ರಹಿಸೋ
ಸಿದ್ಧಿ ಮಾಡಿ ಸಕಲ ಶುಭಕಾರ್ಯಗಳ
ಗಣಗಳ ಒಡೆಯನೆ ಅನುಗ್ರಹಿಸೋ
ಕೈ ಮುಗಿವೆ ಮದವೂರ ಗಣನಾಥನೇ
ಜ್ಞಾನ ವೃದ್ಧಿಯನು ಮಾಡೋ
ಜ್ಞಾನ ಸಿದ್ಧಿಯನು ನೀಡೋ
ಸಿದ್ದಿವಿನಾಯಕ ಬುದ್ದಿ ಪ್ರದಾಯಕಾ
ಶಂಕರ ತನಯನೆ ದಯೆತೋರೋ
ಕೈ ಮುಗಿವೆ ಮದವೂರ ಗಣನಾಥನೇ
ಅಹೋರಾತ್ರಿ ಮನದಲ್ಲಿ ನಿನ್ನ ನಾಮ
ತುಂಬಿರಲಿ ಅನುಕ್ಷಣ ನಿನ್ನ ನೇಮ
ಭಾವರಾಗ ಉಸಿರಲ್ಲಿ ಭಕ್ತಿಯ ಹೋಮ
ಧನ್ಯತೆಯ ಮೂಡಿಸಲಿ ನಿನ್ನ ಪ್ರೇಮ
ಕೈ ಮುಗಿವೆ ಮದವೂರ ಗಣನಾಥನೇ
****************************************************