ಕಣ್ಣುಗಳೆರಡು ಸಾಲದಮ್ಮ

ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲು
ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲು
ಯಾವ ಭಾವದಿ ಯಾವ ರಾಗದಿ ಪಾಡಿ ಹಾಡಲಿ ನಿನ್ನಯ ತಾಯಿ
ಶರಣಾಗತ ವರದೇ ವರ ದೇವಿ ಕರುಣ ಸದಯೇ
ಸುರವರ ಪೂಜಿತೆಯೇ ಕರವೀರ ಪುರಾನಿಲಯೇ
ದುರಿತ ನಿವಾರಿಣಿ ಭವ ಭಯ ಹಾರಿಣಿ ಮಂಗಳದಾಯಿನಿ ನಾರಾಯಣಿ
ಪನ್ನಗ ಫಣಿ ವೇಣಿ ಪದ್ಮಾಸಿನಿ ಹರಿ ರಾಣಿ
ಪದ್ಮ ಗದಾ ಪಾಣಿ ಪರಮ ಗುಣಾ ಸುಗುಣಿ
ಇಂದಿರ ನಯನೇ ಚಂದಿರ ವದನೇ ಅನುಪಮ ಸುಂದರಿ ನಾರಾಯಣಿ
ಧನ ಕನಕವ ಕೊಡುವ ಧನ ಲಕ್ಷ್ಮಿಯು ನೀನಾಗಿ
ಧರೆಯಲಿ ನೆಲೆಸಿರುವೆ ದೀನರ ರಕ್ಷಿಸಲು
ಸಂಕಟ ಹರಿಸುವ ವೆಂಕಟ ರಮಣಿ ಅರ್ಥ ಪರಾಯಣಿ ನಾರಾಯಣಿ