ಕೋಟಿ ಕೋಟಿ ನಮನ

ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯಗಣಪತಿ
ಮಹಾಗಣಪತಿ ದಿವ್ಯಗಣಪತಿ
ಮಹಾ ಗಣಪತಿ

ಇಳಿದು ಬಾ ಇಳಿದು ಬಾ ಇಳಿದು ಬಾ ಗಣಪತಿ
ಕೈಲಾಸ ಗಿರಿಯಿಂದ ಧರೆಗಿಳಿದು ಬಾ
ಬೆಳಗಿ ಬಾ ಹೊಳೆದು ಬಾ
ಬೆಳಗಿ ಬಾ ಹೊಳೆದು ಬಾ ಗಣಪತಿ ಗಣಪತಿ
ಮುತ್ತಿರುವ ಕತ್ತಲನ್ನು ದೂರ ಮಾಡು ಬಾ
ಮುತ್ತಿರುವ ಕತ್ತಲನ್ನು ದೂರ ಮಾಡು ಬಾಬಾ ಬಾಬಾ

ಅಕ್ಕರೆಯ ಆಕಾರ ಮೈ ತಳೆದು ಬಾ
ಸೌಮ್ಯದ ಸಾಕಾರ ಮೂರ್ತಿಯಾಗಿ ಬಾ
ನಲಿದು ಬಾ ಒಲಿದು ಬಾ
ನಲಿದು ಬಾ ಒಲಿದು ಬಾ ಗಣಪತಿ ಗಣಪತಿ
ಇಳೆಯತ್ತ ಹರ್ಷ ವರ್ಷ ಸುರಿಸುತ್ತ ಬಾ
ಇಳೆಯತ್ತ ಹರ್ಷ ವರ್ಷ ಹರಿಸುತ್ತ ಬಾ ಬಾ ಬಾಬಾ

ಕೈ ಮುಗಿದು ಬೇಡುತಿರುವೆ ಕರುಣಾಕರ
ಲೋಕ ರಕ್ಷಕ ಹೇ ವಿಘ್ನೇಶ್ವರ
ನಮ್ಮ ಎದೆಯಲೀ ನಮ್ಮ ನೆಲದಲೀ
ನಮ್ಮ ಎದೆಯಲೀ ನೆಲದಲೀ ಗಣಪತಿ ಗಣಪತಿ
ಸದಾ ಇದ್ದು ನಮ್ಮನ್ನು ಹರಸು ಹರಸು ಬಾ
ಸದಾ ಇದ್ದು ನಮ್ಮನ್ನು ಹರಸು ಹರಸು ಬಾ ಬಾ ಬಾಬಾ

ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯಗಣಪತಿ
ಮಹಾಗಣಪತಿ ದಿವ್ಯಗಣಪತಿ
ಮಹಾ ಗಣಪತಿ
*****************************************************************