ಕುಣಿಯುತ ನಲಿಯುತ ಬಾರ ಗಣೇಶ
ಕುಣಿಯುತ ನಲಿಯುತ ಬಾರ ಗಣೇಶ
ಕುಣಿಯುತ ನಲಿಯುತ ಬಾ
ಮೂಷಿಕ ವಾಹನ ಮೋದಕ ಪ್ರಿಯನೇ
ಮಹಾಮಾಯೆಯ ಮೋಹದ ಸುತನೇ
ಕುಣಿಯುತ ನಲಿಯುತ ಬಾರ ಗಣೇಶ
ಕುಣಿಯುತ ನಲಿಯುತ ಬಾ
ವಿಧ್ಯಾಧಿಪನೇ ವಿಮಲಚರಿತನೇ
ವಿಘ್ನ ನಿವಾರಕ ವೀರನೇ ಧೀರನೇ
ವಿಶ್ವೇಶ್ವರಗೇ ವಂದಿಸಿ ಗೆಲಿದವನೇ
ಕುಣಿಯುತ ನಲಿಯುತ ಬಾರ ಗಣೇಶ
ಕುಣಿಯುತ ನಲಿಯುತ ಬಾ
ತಾಳವ ಹಿಡಿದು ತಂಬೂರಿಯ ಮಿಡಿದು
ವೀಣೆಯ ನುಡಿಸಿ ನೂಪುರ ಧರಿಸಿ
ಧಿಮಿಕಿಟಧಿಮಿ ಎಂದು ಕುಣಿಕುಣಿ ಬಾರ
ಕುಣಿಯುತ ನಲಿಯುತ ಬಾರ ಗಣೇಶ
ಕುಣಿಯುತ ನಲಿಯುತ ಬಾ
*********************************************************