ಕುಣಿಯುತ ನಲಿಯುತ

ಕುಣಿಯುತ ನಲಿಯುತ ಬಾ ಶಂಕರ 
ಮಣಿಯುವೆ ನಿನ್ನಡಿ ಗೆರಗುವೆ ಮುರಹರ
ಕುಣಿಯುತ ನಲಿಯುತ ಬಾ ಶಂಕರ

ಢಮಢಮಢಮ ಎಂದು ಡಮರುಗ ಧ್ವನಿಸಲು
ಠಣಠಣಠಣ ಎಂದು ವೃಷಭವು ನಲಿಯೇ
ಝಣ ತಕ ತಕ ಝಣ ತಾಕಿಟ ತಕ ಕಿಟ
ಝಣ ಎಂದು ನಂದಿ ಮೃದಂಗವ ಬಾರಿಸಲು

ವರಕಮಲೆಶನ ಚರಿತೆಯ ಜಗದೊಳು
ಪರಿಪರಿ ಭಾವದಿ ನರ್ತಿಸಿ ತೋರುತ
ಪೊರೆಯುತ ಭಕುತರ ವರವೀಯುತ ಬಾ
ಗಿರಿಜಾಲಿಂಗಿತ ನಾಟ್ಯಾಚಾರ್ಯ

******************************************************************************