ಲಾಲಿಸಿದಳು ಮಗನ
ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ
ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ
ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು
ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ
ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರವಿಠಲನ
ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ