ಮೆಲ್ಲ ಮೆಲ್ಲನೆ ಬಂದನೆ
ಮೆಲ್ಲ ಮೆಲ್ಲನೆ ಬಂದನೆ ,ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ
ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುದ್ದು ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ
ಮೆಲ್ಲ ಮೆಲ್ಲನೆ ಬಂದನೆ ,ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ
ಹಾಲು ಮಾರಲು ಪೋದರೆ, ನಿನ್ನಯ ಕಂದ,
ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ
ಮೆಲ್ಲ ಮೆಲ್ಲನೆ ಬಂದನೆ ,ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ
ಮೊಸರ ಮಾರಲು ಪೋದರೆ, ನಿನ್ನಯ ಕಂದ
ಹೆಸರೇನೆಂದೆಲೆ ಕೇಳಿದ
ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದನೀತ
ಮೆಲ್ಲ ಮೆಲ್ಲನೆ ಬಂದನೆ ,ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ
ಹೋಗಿರೆ ರಂಗಯ್ಯನ ಮೇಲೆ , ನೀವು
ದೂರೇನು ಕೊಂಡು ಬಂದಿರೆ ,
ಯೋಗೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ
ಮೆಲ್ಲ ಮೆಲ್ಲನೆ ಬಂದನೆ ,ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ
***************************************************************************