ಮುದ್ದು ರಾಮರ ಬಂಟ
ಮುದ್ದು ರಾಮರ ಬಂಟ
ಬುದ್ಧಿಯುಳ್ಳ ಹನುಮಂತ
ಹದ್ದಾಗಿ ಹಾರಿದನೆ ಆಕಾಶಕೆ
ನಿದ್ರೆಗೈವ ಸಮಯದಿ ಎದ್ದು ಬಾರೆಂದರೆ ಅ-
ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ
ದಾರಿ ದೂರವೆಂದು ದಾರಿಯನೆ ನಿರ್ಮಿಸಿದ
ಧೀರ, ರಾಮರ ಬಂಟ ಹನುಮಂತನೆ | ನೋಡಿ-
ಬಾರೆಂದರೆ ಪೋಗಿ ಲಂಕೆಯ ಸುಟ್ಟು
ಬೇಗದಲಿ ಮರವನೇರಿ ಕುಳಿತಾತನೆ
ಮುದ್ದು ರಾಮರ ಬಂಟ
ಬುದ್ಧಿಯುಳ್ಳ ಹನುಮಂತ
ಹದ್ದಾಗಿ ಹಾರಿದನೆ ಆಕಾಶಕೆ
ಅಶೋಕ ವನದಲ್ಲಿ ಸೀತೆಯನು ನೋಡಿದ
ಶ್ರೀರಾಮರ ಬಂಟ ಹನುಮಂತನೆ
ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿ
ತಿಳಿಸಿದ ರಘುವೀರ ದೂತ ಜಾಣ ನಿವನೆ
ಮುದ್ದು ರಾಮರ ಬಂಟ
ಬುದ್ಧಿಯುಳ್ಳ ಹನುಮಂತ
ಹದ್ದಾಗಿ ಹಾರಿದನೆ ಆಕಾಶಕೆ
ಆತನ ಮಾತಿಗೆ ಸೇತುವೆನೆ ಕಟ್ಟಿಸಿದ
ಸೀತಾರಾಮರ ಬಂಟ ಹನುಮಂತನೆ
ಸೀತಾದೇವಿ ಅಮ್ಮನಿಗೆ ಪ್ರೀತಿಯ ಬಂಟನಾದ
ಮುಖ್ಯಪ್ರಾಣ ಹಯವದನನ ದೂತನೆ
******************************************************************