ಮುಂಜಾನೆಯೆದ್ದು ಗೋವಿಂದ ಎನ್ನಿ
ಮುಂಜಾನೆಯೆದ್ದು ಗೋವಿಂದ ಎನ್ನಿ
ನಮ್ಮನಂಜಿಪ ದುರಿತವು ದೂರವೆನ್ನಿ
ಅಸುರಸಂಹಾರಿಯೆನ್ನಿ ದಶಶಿರವೈರಿಯೆನ್ನಿ
ಶಿಶುವು ಮೊರೆಯಿಡಲು ರಕ್ಷಿಸಿದನೆನ್ನಿ
ಅಸುರನರಣ್ಯದೊಳ್ ಭಸ್ಮವ ಮಾಡಲು
ವಸುಧೆಯೊಳ್ ನಾಟ್ಯವನಾಡಿದನೆನ್ನಿ
ಮುಂಜಾನೆಯೆದ್ದು ಗೋವಿಂದ ಎನ್ನಿ
ನಮ್ಮನಂಜಿಪ ದುರಿತವು ದೂರವೆನ್ನಿ
ಬಲಿಯ ಬೇಡಿದನೆನ್ನಿ ಚೆಲುವ ವಾಮನನೆನ್ನಿ
ಲಲನೆಯ ಅಭಿಮಾನ ಕಾಯ್ದನೆನ್ನಿ
ಕಲಿಯುಗದಲಿ ಬಂದ ಕೃಷ್ಣಾವತಾರನೆನ್ನಿ
ಸಲೆ ಪಾಂಡುಸುತರನ್ನು ಪಾಲಿಸಿದನೆನ್ನಿ
ಮುಂಜಾನೆಯೆದ್ದು ಗೋವಿಂದ ಎನ್ನಿ
ನಮ್ಮನಂಜಿಪ ದುರಿತವು ದೂರವೆನ್ನಿ
ಕರುಣಾಕರನೆನ್ನಿ ಕಪಟನಾಟಕನೆನ್ನಿ
ಕರಿರಾಜನನು ಕಾಯ್ದ ಕೃಷ್ಣನೆನ್ನಿ
ಪರಿಪರಿಯಿಂದಲಿ ಭಕ್ತರ ಸಲಹುವ
ವರದ ಪುರಂದರವಿಠಲನೆನ್ನಿ
ಮುಂಜಾನೆಯೆದ್ದು ಗೋವಿಂದ ಎನ್ನಿ
ನಮ್ಮನಂಜಿಪ ದುರಿತವು ದೂರವೆನ್ನಿ
************************************************************