ಮುರಳಿಯ ನಾದವ

ಮುರಳಿಯ ನಾದವ ಕೇಳಿ ಬನ್ನೀ
ಮುರಳಿಯ ನಾದವ ಕೇಳಿ

ಮಧುರನಾಥನು ಮುರಳಿಯನೂದಲು
ಸುರಿವುದಾನಂದ ಜಲಾ ನಯನದಲೀ
ಸುರಿವುದಾನಂದ ಜಲಾ

ಕಂಗೊಳಿಸುವ ಬೆಳದಿಂಗಳಾ ಸೊಬಗಿರಿ
ತಂಗಾಳಿಯ ಸುಖದೀ ಶ್ರೀ ರಂಗನಾ
ಶ್ಯಾಮಲಾಂಗನು ತನ್ನ ಕೋಮಲ ಕರದಲ್ಲೀ
ಆ ಮುರಳಿಯ ಹಿಡಿಯೇ
ಶ್ರೀ ದಯದಲಿ ಪ್ರೇಮವ ತುಂಬುವುದೂ

ಬನ್ನೀ
ಮುರಳಿಯ ನಾದವ ಕೇಳಿ

ಪಂಚಬಾಣನ ಪಿತ ಮುರಳಿಯ ಮಧುರಸ
ಪಂಚಲೇಮಗೆ ರೋಮಾಂಚವಾಗುವುದು
ರಜನೀಕಾಂತನ ಕುಲದಲಿ ಜನಿಸೀ
ವ್ರಜಜನಗಳಿಗಧಿಕಾ
ಪ್ರಸನ್ನನಾ ಮುರಳಿಯ ನಾದವ ಕೇಳಿ

ಬನ್ನೀ
ಮುರಳಿಯ ನಾದವ ಕೇಳಿ