ನಾನೇನು ಮಾಡಿದೆನೋ ರಂಗಯ್ಯ ರಂಗ

ನಾನೇನು ಮಾಡಿದೆನೋ ರಂಗಯ್ಯ ರಂಗ
ನೀನೆನ್ನ ಕಾಯಬೇಕು

ಕರಿರಾಜ ಕರೆಸಿದನೆ, ದ್ರೌಪದಿ ದೇವಿ
ಬರೆದೋಲೆಯ ಕಳುಹಿದಳೆ
ಹರುಷದಿಂದಲಿ ಋಷಿಪತ್ನಿಯ ಶಾಪವ
ಪರಿಹರಿಸಿದೆಯಲ್ಲೋ ಹೇ ಸ್ವಾಮಿ

ನಾನೇನು ಮಾಡಿದೆನೋ, ರಂಗಯ್ಯ ರಂಗ
ನೀನೆನ್ನ ಕಾಯಬೇಕು

ರಕ್ಕಸ ತನುಜನಲ್ಲೆ ಪ್ರಹ್ಲಾದ
ಚಿಕ್ಕ ಪ್ರಾಯದ ಧ್ರುವನು
ಸಿಕ್ಕಿದ ಪಾಪ ಮಾಡಿದ ಅಜಾಮಿಳ ನಿ-
ನ್ನಕ್ಕರೆ ಮಗನೆ ಪೇಳೊ ಹೇ ಸ್ವಾಮಿ

ನಾನೇನು ಮಾಡಿದೆನೋ, ರಂಗಯ್ಯ ರಂಗ
ನೀನೆನ್ನ ಕಾಯಬೇಕು


ಒಪ್ಪಿಡಿ ಅವಲಕ್ಕಿಯ ಕೃಷ್ಣಯ್ಯ ನಿನ-
ಗೊಪ್ಪಿಸಿದವಗೊಲಿದೆ
ಒಪ್ಪೆನು ನಿನಗೆ ಶ್ರೀ ಪುರಂದರವಿಠಲವ-
ರಪ್ಪಂತೆ ಕಾಯಬೇಕೋ ಹೇ ಸ್ವಾಮಿ

ನಾನೇನು ಮಾಡಿದೆನೋ, ರಂಗಯ್ಯ ರಂಗ
ನೀನೆನ್ನ ಕಾಯಬೇಕು

***********************************************************