ನಲಿದಾಡೇ ಎನ್ನ ನಾಲಗೆ ಮ್ಯಾಲೆ
ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ
ಕುಣಿದಾಡೆ ಎನ್ನ ನಾಲಗೆ ಮ್ಯಾಲೆ
ಘಿಲು ಘಿಲು ಘಿಲು ಗೆಜ್ಜೆಯ ನಾದ
ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ
ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೆ
ಕರುಣದಿಂದ ಪರಿಪಾಲಿಸು ಮಾತೆ
ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ
ಕುಣಿದಾಡೆ ಎನ್ನ ನಾಲಗೆ ಮ್ಯಾಲೆ
ನಸುನಗೆ ಮುಖವು ನಾಸಾಭರಣ
ಎಸೆವ ಕಪೋಲ ಹೊಸ ಮುತ್ತಿನ ಚಳ ತುಂಬಿಟ್ಟ ಶ್ರವಣ
ತಿಲಕವು ಹಸನ ಶಶಿ ಸೂರ್ಯರ ಆಭರಣ ಶೋಭಿತಳೆ
ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ
ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ
ಕುಣಿದಾಡೆ ಎನ್ನ ನಾಲಗೆ ಮ್ಯಾಲೆ
ಶೃಂಗಾರವಾದ ಜಡೆ ಬಂಗಾರ
ರಾಗುಟಿ ಶೌರಿ ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ರಂಗು ಮನೋಹರ
ಮಂದಗಮನೆ ಅರವಿಂದ ನಯನ ಸಿರಿ
ರಂಗ ವಿಟ್ಟಲನ ತೋರೇ ಶುಭಾಂಗಿ
ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ
ಕುಣಿದಾಡೆ ಎನ್ನ ನಾಲಗೆ ಮ್ಯಾಲೆ
*************************************************************************