ನೀರೆ ತೋರೆಲೆ
ನೀರೆ ತೋರೆಲೆ ನೀರೆ ತೋರೆಲೆ… ನೀಲ ವರ್ಣನ ದೇವನ
ಭಾಮೆ ತೋರೆಲೆ ಭಾಮೆ ತೊರೆಲೆ… ಬಾಲ ಉಡುಪಿಯ ಕೃಷ್ಣನ
ಕಡೆವ ಕಡೆಗೋಲು ನೇಣು ಸಹಿತಲಿ ಹಡಗಿನೊಳಗಿಂದ ಬಂದವನ
ಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿಯ ಕೃಷ್ಣನ
ಮುದ್ದು ಮುಖದವ ಮೂರು ಜಡೆಯಲಿ ಇದ್ದ ಉಡುಪಿಯ ಸ್ಥಳದಲ್ಲಿ
ಒದ್ದು ಶಕಟವ ಆದಿ ಗುರುಗಳ ಮುದ್ದು ಉಡುಪಿಯ ಕೃಷ್ಣನ
ಬಾಲಸನ್ಯಾಸಿಗಳು ನಿನ್ನನು ಪ್ರೇಮದಿಂದಲಿ ಭಜಿಸಲು
ಆಲದೆಲೆಯ ಮೇಲೆ ಮಲಗಿದ… ಬಾಲ ಉಡುಪಿಯ ಕೃಷ್ಣನ
ಅದ್ವಯಾ ಹರಿ ಬ್ರಹ್ಮ ವಲ್ಲಭ ವಿದ್ಯಾ ಸಾರಥಿ ಮಾಡಿದೆ
ಸದ್ಗುರು ಮುನಿ ವಾದಿರಾಜನ ಮುದ್ದು ಉಡುಪಿಯ ಕೃಷ್ಣನ
***********************************************************************