ನೋಡು ನೋಡು ಕೃಷ್ಣ
ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ
ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ
ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ
ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ
ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ
ಹರಿಯುವ ವಾನರರ ಕೂಡ ಹಾರಾಡುತಾನೆ
ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ
ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ
ನೀಲಗುದುರೆಯನೇರಿ ಹಾರಿಸಾಡುತಾನೆ
ಬಾಲಕರ ಕೂಡಿಕೊಂದು ಕುಣಿದಾಡುತಾನೆ
ಲೋಲಪುರಂದರವಿಠಲ ತಾನು ಕುಣಿಯುತಾನೆ
************************************************************